ಬಾಬಲ್, ಇಸಾಕ್ ಅಮಾನ್ಯೂಯೆಲ್‍ವಿಚ್ 1894-1941? ರಷ್ಯದ ಕಥೆಗಾರ ಮತ್ತು ನಾಟಕಕಾರ. ಓಡೆಸ್ಸಾ ಟೇಲ್ಸ್ (1923-24) ಕೃತಿಯಿಂದ ಪ್ರಖ್ಯಾತನಾದ. ರೊಮ್ಯಾಂಟಿಕ್ ಒಳಯುದ್ಧದಲ್ಲಿ ತನ್ನ ಅನುಭವಗಳ ಆಧಾರದಿಂದ ರಚಿಸಿದ ರೆಡ್ ಕ್ಯಾವಲರಿ (ಕೆಂಪು ಅಶ್ವದಳ 1926) ಎನ್ನುವ ಚಿತ್ರಗಳು ಮತ್ತು ಕಥೆಗಳ ಸಂಕಲನದಲ್ಲಿ ಹೋಲಿಕೆ ವ್ಯತ್ಯಾಸಗಳನ್ನು ಬಳಸಿರುವ ರೀತಿ ಅದ್ಭುತವಾದುದು. 1935ರಿಂದ ಕಾಣದಾದ ಈತ 1941ರಲ್ಲಿ ಸತ್ತಿರಬೇಕು ಎನ್ನಲಾಗಿದೆ.	 						    (ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ